inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ
ನಮ್ಮ ರಾಜ್ಯದಲ್ಲೇ ಅಲ್ಲ, ಕೇಂದ್ರ ಸರ್ಕಾರವೂ ಅಂತರ್ಜಾತಿ ಮದುವೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಾಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಅಂದ್ರು ಈ ಸ್ಕೀಮ್. ಇದರಡಿ ಒಬ್ಬರು SC ವರ್ಗದವರನ್ನು ಮದುವೆಯಾದ್ರೆ 2.50 ಲಕ್ಷ ರೂ.ವರೆಗೆ ಆರ್ಥಿಕ ಸಹಾಯ ಸಿಗತ್ತೆ.
ಯಾರಿಗೆ ಸಿಗತ್ತೆ?
– ವರ/ವಧುವರಲ್ಲಿ ಒಬ್ಬರು SC (ಷೆಡ್ಯೂಲ್ಡ್ ಕಾಸ್ಟ್) ಆಗಿರ್ಬೇಕು.
– ಮದುವೆ ಕಾನೂನುಬದ್ಧವಾಗಿ (Special Marriage Act ಅಥವಾ Marriage Registration) ಆಗಿರ್ಬೇಕು.
– ಮದುವೆಯ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಹಾಕ್ಬೇಕು.
– ವರ-ವಧು ಇಬ್ಬರ ಒಟ್ಟುಗೂಡಿದ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರ್ಬೇಕು.
ಎಷ್ಟು ಹಣ ಸಿಗತ್ತೆ?
– ಪ್ರಸ್ತುತ ಸರ್ಕಾರದಿಂದ ₹2.50 ಲಕ್ಷ ರೂ.ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ಜಮಾ ಆಗತ್ತೆ.
– ಈ ಹಣವನ್ನು ಹೊಸ ಜೀವನ ಶುರು ಮಾಡೋಕೆ, ಮನೆ ಬಾಡಿಗೆ, ಶಿಕ್ಷಣ, ವೃತ್ತಿ, ವ್ಯಾಪಾರ ಯಾವುದಕ್ಕೂ ಬಳಸ್ಬಹುದು.
ಹೇಗೆ ಅರ್ಜಿ ಹಾಕ್ಬೇಕು?
- ಮೊದಲು ಮದುವೆ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಮಾಡಿಸ್ಕೊಳ್ಳಿ.
- ನಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಅಥವಾ sevasindhu.karnataka.gov.in ಪೋರ್ಟಲ್‌ಗೆ ಹೋಗಿ ಆನ್‌ಲೈನ್ ಅರ್ಜಿ ಹಾಕ್ಬೇಕು.
- ಆಧಾರ್, ಬ್ಯಾಂಕ್ ಪಾಸ್‌ಬುಕ್, ಆದಾಯ-ಜಾತಿ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ ಅಟ್ಯಾಚ್ ಮಾಡ್ಬೇಕು.
ಗಮನಿಸಿ