ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ
ಬೆಂಗಳೂರು: ರಾಜ್ಯದಲ್ಲಿ ಈಗ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರವು ಮುನ್ನಡಿಯನ್ನು ಬರೆದಿದೆ, ಇನ್ನು ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿ ಕಡ್ಡಾಯವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಆಸ್ತಿ ನೋಂದಣಿ ಕಾಯ್ದೆಯ (ಕರ್ನಾಟಕ ತಿದ್ದುಪಡಿ) 2025 ರ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ.
ಸರ್ಕಾರದ ಪ್ರಕಾರ ಡಿಜಿಟಲ್ ಸಹಿ ವ್ಯವಸ್ಥೆಯು ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿ ಸುಗಮಗೊಳಿಸುವುದರ ಜೊತೆಗೆ, ಅಧಿಕಾರಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಿ ಆಫ್ ಲೈನ್ ವಂಚನೆಯನ್ನು ತಡೆಗಟ್ಟಲಿದೆ. ಈ ತಿದ್ದುಪಡಿಯಿಂದಾಗಿ ದಾಖಲೆಗಳ ಸುರಕ್ಷತೆ ಹೆಚ್ಚುವುದು ಮಾತ್ರವಲ್ಲದೆ, ಪ್ರಕ್ರಿಯೆಯ ವೇಗವು ದೊರಕಲಿದೆ, ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಮುಖ್ಯ ಬದಲಾವಣೆಗಳು:
- ಕಂಪ್ಯೂಟರ್ ಡಿಜಿಟಲ್ ಸಹಿ: ಮ್ಯಾನುಯಲ್ ಸಹಿಗೆ ಬದಲಾಗಿ ಅಧಿಕಾರಿಗಳು ಮತ್ತು ಸಂಬಂಧಿತ ವ್ಯಕ್ತಿಗಳು ಡಿಜಿಟಲ್ ಸಹಿ ಬಳಸುವುದು ಕಡ್ಡಾಯವಾಗಿದೆ.
- ಡಿಜಿಟಲ್ ದಾಖಲೆಗಳು ಕಡ್ಡಾಯ: ಇನ್ಮುಂದೆ ಎಲ್ಲಾ ನೊಂದಣಿ ದಾಖಲೆಗಳು ಸ್ಕ್ಯಾನ್ ಮಾಡಿದ ನಂತರ ಪಿಡಿಎಫ್ ಅಥವಾ ಇ ದಾಖಲೆಗಳ ರೂಪದಲ್ಲಿಯೇ ಸಲ್ಲಿಸಬೇಕು.
- ಆಧಾರ್ ಏಕೀಕರಣ: RTC ದಾಖಲೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.
- ಸ್ವಯಂ ಚಾಲಿತ ನೊಂದಣಿ: ರೈತರು ಹಾಗೂ ನಾಗರಿಕರು ಕಚೇರಿಗೆ ಹಾಜರಾಗದೆ ಡಿಜಿಟಲ್ ಮೂಲಕವೇ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಉಪಯೋಗಗಳು:
ಈ ಹೊಸ ನಿಯಮದ ಅನುಷ್ಠಾನದಿಂದಾಗಿ, ಭ್ರಷ್ಟಾಚಾರ ಕಡಿಮೆಯಾಗುವ ನಿರೀಕ್ಷೆ ಇದೆ, ಡಿಜಿಟಲ್ ದಾಖಲೆಗಳು ವಂಚನೆಯನ್ನು ತಡೆಯಲಿದ್ದು, ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ, ದಾಖಲಾತಿಗಳನ್ನು ಸುರಕ್ಷಿತವಾಗಿ ಡಿಜಿಟಲ್ ಸ್ಟೋರೇಜ್ ಮೂಲಕ ಸಂಗ್ರಹಿಸುವುದರಿಂದ ಕಳೆದುಹೋಗುವ ಯಾವುದೇ ಆತಂಕ ಇರುವುದಿಲ್ಲ, ಗ್ರಾಮೀಣ ಪ್ರದೇಶದವರು ಕೂಡ ದೂರದಿಂದಲೇ ದಾಖಲೆಗಳನ್ನು ಸಲ್ಲಿಸಲು ಅನುಕೂಲವಾಗುವುದು.
ತಾಂತ್ರಿಕ ಸುಧಾರಣೆಗಳು:
ಇದಕ್ಕೂ ಹಿಂದೆ ಕಾನೂನು ಬದ್ಧ ಮಾನ್ಯತೆ ಇಲ್ಲದ ಇ ಸ್ಕೆಚ್ ವ್ಯವಸ್ಥೆಗೆ ಈ ಬಾರಿ ಮಾನ್ಯತೆಯನ್ನು ನೀಡಲಾಗಿದೆ
ಜೊತೆಗೆ ಸೆಕ್ಷನ್ 32ರ ಅಡಿಯಲ್ಲಿ ತಿದ್ದುಪಡಿ ಮೂಲಕ ಡಿಜಿಟಲ್ ದಾಖಲೆಗಳು ಮತ್ತು ಸಹಿಗಳು ಕಾನೂನು ಬದ್ಧ ಸ್ಥಾನಮಾನದಿಂದ ದೊರೆತಿದೆ.
ಮುಂದಿನ ಹಂತಗಳು:
ಸರ್ಕಾರವು ಮುಂದಿನ ದಿನಗಳಲ್ಲಿ ಇನ್ನಷ್ಟು ಡಿಜಿಟಲ್ ಸೇವೆಗಳನ್ನು ಪರಿಚಯಿಸಲು ಮುಂದಾಗಿದೆ, ಮೊಬೈಲ್ ಅಪ್ಲಿಕೇಶನ್ ಮೂಲಕ ನೊಂದಣಿ ಆನ್ಲೈನ್ ಪಾವತಿ ಹಾಗೂ ರಿಯಲ್ ಟೈಮ್ ದಾಖಲೆಗಳ ಪರಿಶೀಲನೆ ಸೇವೆಯನ್ನು ಆರಂಭಿಸಲು ಉದ್ದೇಶವನ್ನು ನಡೆಸಿದೆ.
ಕರ್ನಾಟಕದಲ್ಲಿ ಡಿಜಿಟಲ್ ಸಹಿ ಕಡ್ಡಾಯಗೊಳಿಸುವುದರಿಂದ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿನ ದೊಡ್ಡ ಪರಿವರ್ತನೆ, ಇದು ಪಾರದರ್ಶಕತೆ ವೇಗ ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ನಾಗರಿಕರಿಗೆ ಸುಲಭ ಸುರಕ್ಷಿತ ಮತ್ತು ನಿಖರ ಸೇವೆ ಒದಗಿಸುವ ಸರ್ಕಾರದ ಈ ಹೆಜ್ಜೆ ರಾಜ್ಯದ ಆಡಳಿತಾತ್ಮಕ ಸುಧಾರಣೆಯ ಮೂಲಕ ಮೈಲುಗಲ್ಲಾಗಿ ಪರಿಣಾಮ ಬೀರಲಿದೆ.