ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 – ಪದವೀಧರರಿಗೆ ಸುವರ್ಣಾವಕಾಶ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 – ಪದವೀಧರರಿಗೆ ಸುವರ್ಣಾವಕಾಶ!

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಶಾಖೆಗಳು ಮತ್ತು ಸೇವಾ ಕೇಂದ್ರಗಳಲ್ಲಿ ಗ್ರಾಹಕ ಸೇವೆ ಮತ್ತು ಬೆಂಬಲಕ್ಕಾಗಿ ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಬಾರಿ ಸುಮಾರು 5,583 ಹುದ್ದೆಗಳ ನೇಮಕಾತಿ ನಡೆಯಲಿದೆ.

WhatsApp Group Join Now
Telegram Group Join Now

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ 6ರಿಂದಲೇ ಆರಂಭವಾಗಿದ್ದು, ಆಗಸ್ಟ್ 26ರ ರಾತ್ರಿ 12 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರ ಉದ್ಯೋಗ ಬಯಸುವ ಯುವಕರಿಗೆ ಇದು ಒಂದು ಅಪರೂಪದ ಅವಕಾಶ.

ಅರ್ಹತೆ ಮತ್ತು ವಯೋಮಿತಿ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ ಪದವಿ ಪೂರ್ಣಗೊಳಿಸಿರಬೇಕು. ಯಾವುದೇ ಶಾಖೆಯ ಪದವಿ ಇದಕ್ಕೆ ಮಾನ್ಯ.
ವಯೋಮಿತಿಯನ್ನು 20 ರಿಂದ 28 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಅಂದರೆ, 20 ವರ್ಷ ಪೂರೈಸಿರುವ ಹಾಗೂ 28 ವರ್ಷ ಮೀರುವುದಕ್ಕೆ ಮುನ್ನ ಅರ್ಜಿ ಸಲ್ಲಿಸುವವರು ಮಾತ್ರ ಅರ್ಹರಾಗುತ್ತಾರೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರಕಾರದ ನಿಯಮಾವಳಿಯಂತೆ ವಯೋಮಿತಿ ಸಡಿಲಿಕೆ ಸಿಗಲಿದೆ.

ಸಂಬಳ ಮತ್ತು ಸೌಲಭ್ಯಗಳು

SBI junior assosiate ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಆಕರ್ಷಕ ಸಂಬಳ ದೊರೆಯಲಿದೆ.

  • ಆರಂಭಿಕ ಮೂಲ ಸಂಬಳ 26,730 ರೂ.
  • ಮೆಟ್ರೋ ನಗರಗಳಲ್ಲಿ ಭತ್ಯೆ ಸೇರಿ ಸುಮಾರು 46,000 ರೂ. ತನಕ ವೇತನ ಸಿಗಬಹುದು.

ಇದರ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ವೈದ್ಯಕೀಯ ಸೌಲಭ್ಯ, ಪ್ರಯಾಣ ಭತ್ಯೆ (LTC) ಮುಂತಾದ ಅನೇಕ ಸೌಲಭ್ಯಗಳನ್ನು ಪಡೆಯಬಹುದು.

ಅರ್ಜಿ ಶುಲ್ಕ

  • ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ 750 ರೂ.
  • SC, ST ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ಅರ್ಜಿಯು ಸಂಪೂರ್ಣ ಉಚಿತ.

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಅಧಿಕೃತ sbi.co.in ವೆಬ್‌ಸೈಟ್‌ಗೆ ಹೋಗಿ “Careers” ವಿಭಾಗದಲ್ಲಿ ತೆರೆಯಲಾಗಿರುವ ನೇಮಕಾತಿ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

  • ಮೊದಲು ಹೊಸ ನೋಂದಣಿ ಮಾಡಬೇಕು.
  • ಅಗತ್ಯವಿರುವ ಮಾಹಿತಿ, ಶೈಕ್ಷಣಿಕ ವಿವರ, ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಬೇಕು.
  • ಅರ್ಜಿ ಶುಲ್ಕ ಪಾವತಿಸಿದ ನಂತರ ಅರ್ಜಿ ದೃಢೀಕರಿಸಲಾಗುತ್ತದೆ.

ಯಾವ ರಾಜ್ಯಗಳಿಗೆ ಹುದ್ದೆಗಳಿವೆ?

ಈ ನೇಮಕಾತಿ ದೇಶಾದ್ಯಂತ ಅನೇಕ ರಾಜ್ಯಗಳಿಗೆ ಸಂಬಂಧಿಸಿದೆ. ಹೆಚ್ಚಿನ ಹುದ್ದೆಗಳು ಉತ್ತರ ಪ್ರದೇಶ ಮತ್ತು ನವದೆಹಲಿಗೆ ಬಿಡುಗಡೆಯಾಗಿವೆ. ಅದಲ್ಲದೆ ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಹರಿಯಾಣ, ಪಂಜಾಬ್, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಕೇರಳ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೂ ಹುದ್ದೆಗಳು ತೆರೆದಿವೆ.

SBI ಜೂನಿಯರ್ ಅಸೋಸಿಯೇಟ್ ಹುದ್ದೆಗಳು ಉತ್ತಮ ಸಂಬಳ, ಭದ್ರ ವೃತ್ತಿ ಮತ್ತು ಭವಿಷ್ಯದಲ್ಲಿ ಉತ್ತರವಣಿಗೆಗೆ ಅವಕಾಶ ನೀಡುವ ಹುದ್ದೆಗಳಾಗಿವೆ. ಬ್ಯಾಂಕಿಂಗ್ ವಲಯದಲ್ಲಿ ದೀರ್ಘಾವಧಿ ಕೆಲಸ ಮಾಡಲು ಬಯಸುವ ಯುವಕರಿಗೆ ಈ ಅವಕಾಶವನ್ನು ಕೈಬಿಡುವುದು ದೊಡ್ಡ ತಪ್ಪಾಗಬಹುದು. ಆದ್ದರಿಂದ ಅರ್ಹ ಅಭ್ಯರ್ಥಿಗಳು ಆಗಸ್ಟ್ 26ರೊಳಗೆಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now

Leave a Comment