Ronaldo engaged : 26 ಕೋಟಿ ರೂ. ಉಂಗುರ ಹಾಕಿ ಮಾಡೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರೊನಾಲ್ಡೋ

Ronaldo engaged : 26 ಕೋಟಿ ರೂ. ಉಂಗುರ ಹಾಕಿ ಮಾಡೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರೊನಾಲ್ಡೋ

ಫುಟ್‌ಬಾಲ್ ಜಗತ್ತಿನ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಕೊನೆಗೂ ತಮ್ಮ ಲಾಂಗ್‌ಟೈಮ್ ಪ್ರೇಯಸಿ ಜಾರ್ಜಿನಾ ರೊಡ್ರಿಗಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ 9 ವರ್ಷಗಳಿಂದ ಇಬ್ಬರೂ ಒಟ್ಟಿಗೆ ಇದ್ದರೂ, ಈಗ ಮಾತ್ರ ಅಧಿಕೃತವಾಗಿ ತಮ್ಮ ಸಂಬಂಧಕ್ಕೆ ಮುದ್ರೆ ಹಾಕಿದ್ದಾರೆ.

WhatsApp Group Join Now
Telegram Group Join Now

ರೊನಾಲ್ಡೋ ತಮ್ಮ ಪ್ರೀತಿಗೆ 26 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ಉಂಗುರ ಹಾಕಿದ್ದಾರೆ. ಈ ಎಂಗೇಜ್‌ಮೆಂಟ್ ರಿಂಗ್ ಸುಮಾರು 50 ಕ್ಯಾರಟ್ ತೂಕವಿದ್ದು, ಬೆಲೆ 3 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 26 ಕೋಟಿ.

ಇವರ ಲವ್ ಸ್ಟೋರಿ 2016ರಲ್ಲಿ ಶುರುವಾಯಿತು. ಮ್ಯಾಡ್ರಿಡ್‌ನ ಗೂಚಿ ಸ್ಟೋರ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾದರು. ಆ ಬಳಿಕ ಗೆಳೆತನ, ಪ್ರೀತಿ ಬೆಳೆದಿತು. 2017ರಲ್ಲಿ ತಮ್ಮ ಸಂಬಂಧವನ್ನು ಪಬ್ಲಿಕ್ ಮಾಡಿದರು.

ಇವ್ರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಜೊತೆಗೆ ರೊನಾಲ್ಡೋ ಅವರ ಹಳೆಯ ಮೂವರು ಮಕ್ಕಳನ್ನೂ ಜಾರ್ಜಿನಾ ತಾಯಿಯಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಇವ್ರಿಬ್ಬರು ಒಟ್ಟಿಗೆ ಐದು ಮಕ್ಕಳ ಪೋಷಕರು. ರೊನಾಲ್ಡೋ ಮೊದಲು ಮದುವೆಯಾಗಿಲ್ಲ, ಆದರೆ ಬಾಡಿಗೆ ತಾಯ್ತನದ ಮೂಲಕ ಮೂರು ಮಕ್ಕಳಿಗೆ ತಂದೆಯಾಗಿದ್ದರು.

ಜಾರ್ಜಿನಾ ಮೂಲತಃ ಅರ್ಜೆಂಟೀನಾದವರು. ಆದರೆ ಬೆಳೆದದ್ದು ಸ್ಪೇನ್‌ನ ಜಾಕಾದಲ್ಲಿ. ಬಾಲ್ಯದಲ್ಲಿ ಡ್ಯಾನ್ಸರ್ ಆಗಿ ಶುರುಮಾಡಿ, ಬಳಿಕ ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡಿದರು. ಇವತ್ತು ಯಶಸ್ವಿ ಮಾಡೆಲ್ ಮಾತ್ರವಲ್ಲದೆ ಸ್ವಂತ ಉದ್ಯಮಗಳನ್ನೂ ನಡೆಸುತ್ತಿದ್ದಾರೆ.

ರೊನಾಲ್ಡೋ ಈಗ 39ರ ಹರೆಯದಲ್ಲಿದ್ದಾರೆ. ಇನ್ನೂ ಫುಟ್‌ಬಾಲ್ ಮೈದಾನದಲ್ಲಿ ತಮ್ಮ ಪ್ರಭಾವವನ್ನು ಮುಂದುವರಿಸಿದ್ದಾರೆ. ಅವರ ಜೀವನದ ಈ ಹೊಸ ಹಂತ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಒಟ್ಟಿನಲ್ಲಿ, ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಮಾಡೆಲ್ ಜಾರ್ಜಿನಾ ರೊಡ್ರಿಗಸ್ ನಿಶ್ಚಿತಾರ್ಥ ಸುದ್ದಿಯೇ ಇವತ್ತು ಜಗತ್ತಿನ ಹಾಟ್ ಟಾಪಿಕ್.

WhatsApp Group Join Now
Telegram Group Join Now

Leave a Comment