ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ:

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ:

ರಾಜ್ಯ ಸರ್ಕಾರವು ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯು ಸುಮಾರು ಎರಡು ವರ್ಷಗಳ ಕಾಲ ನಡೆದ ಸಂವಾದ, ವಿಶ್ಲೇಷಣೆ ಮತ್ತು ಅಧ್ಯಯನದ ಬಳಿಕ ಸಿದ್ಧಗೊಂಡಿರುವ ಈ ವರದಿಯು, ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ದಾರಿ ತೋರಿಸುವ ಮಹತ್ವದ ದಾಖಲೆಯನ್ನ ಪರಿಗಣಿಸಲಾಗಿದೆ.

WhatsApp Group Join Now
Telegram Group Join Now

ಆಯೋಗದ ಕಾರ್ಯವಿಧಾನ;

ಅಕ್ಟೋಬರ್ 11 2023 ರಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ ಬಳಿಕ, ಪ್ರೊಫೆಸರ್ ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಈ ಆಯೋಗವು ರಚನೆಗೊಂಡಿತು, ಒಟ್ಟು 17 ಸದಸ್ಯರ 6 ವಿಷಯ ತಜ್ಞರ ಹಾಗೂ ಒಬ್ಬ ಕಾರ್ಯದರ್ಶಿಯೊಂದಿಗೆ ಈ ಆಯೋಗದ ಕಾರ್ಯ ಆರಂಭ ಮಾಡಲಾಗಿತ್ತು, ಶಾಲಾ, ಉನ್ನತ ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ ಒಟ್ಟು 35 ಕಾರ್ಯಪಡೆಗಳನ್ನು ರಚಿಸಲಾಯಿತು, ಸುಮಾರು 379 ತಜ್ಞರು ಈ ಕಾರ್ಯಪಡೆಗಳಲ್ಲಿ ಭಾಗವಹಿಸಿದ್ದರು, 42 ಪ್ರಮುಖ ಸಭೆಗಳು ಮತ್ತು 132 ಉಪಸಬಗಳ ಬಳಿಕ ವರದಿ ರೂಪಗೊಂಡಿದ್ದು, ಇದು ಸುಮಾರು 2775 ಮಾನವರ ದಿನಗಳ ಶ್ರಮಕ್ಕೆ ಸಮನಾಗಿದೆ.

ಈ ಆಯೋಗವು ಸಾಲ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ 59 ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ 73 ಸಾರ್ವಜನಿಕ ಸಂವಾದಗಳನ್ನು ಆಯೋಜಿಸಿತು. ಮಧ್ಯಂತರ ವರದಿಯನ್ನು 2024ರ ಮಾರ್ಚ್ ನಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು, ನಂತರ ಅಗತ್ಯ ಸಮಯ ವಿಸ್ತರಣೆ ದೊರಕಿದ ಹಿನ್ನೆಲೆಯಲ್ಲಿ ಆಗಸ್ಟ್ 8ರಂದು ಅಂತಿಮ ವರದಿ ಸಲ್ಲಿಕೆಯಾಯಿತು.

ವರದಿಯ ವಿನ್ಯಾಸ

ಆಯೋಗದ ಶಿಫಾರಶಗಳು ಮೂರು ಸಂಪುಟಗಳಲ್ಲಿ ಕ್ರೂಡೀಕರಿಸಲ್ಪಟ್ಟಿವೆ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಸಂಪುಟ 1A ಮತ್ತು 1ಬಿ ತಲಾ 580 ಪುಟಗಳನ್ನು ಹೊಂದಿದೆ, ವೃತ್ತಿಪರ ಶಿಕ್ಷಣಕ್ಕಾಗಿ ಸಂಪುಟ ಮೂರು ಸುಮಾರು 450 ಪುಟಗಳನ್ನು ಒಳಗೊಂಡಿದೆ ಒಟ್ಟಾರೆ ವರದಿ 2197 ಪುಟಗಳ ದೈತ್ಯ ದಾಖಲೆಯಾಗಿದೆ.

ಶಾಲಾ ಶಿಕ್ಷಣದ ಪ್ರಮುಖ ಶಿಫರಸುಗಳು;

ಈ ಆಯೋಗವು ಶಾಲಾ ಶಿಕ್ಷಣ ವಲಯಕ್ಕೆ 26 ಶಿಫಾರಸುಗಳನ್ನು ನೀಡಿದೆ, ಮುಖ್ಯವಾಗಿ 2+8+4 ರಚನೆ (ಎರಡು ವರ್ಷ ಪೂರ್ವ ಪ್ರಾಥಮಿಕ, ಎಂಟು ವರ್ಷ ಪ್ರಾಥಮಿಕ ಹಾಗೂ ನಾಲ್ಕು ವರ್ಷ ಮಾಧ್ಯಮಿಕ) ಅಳವಡಿಸಲು ಸೂಚನೆಯನ್ನು ಹೊರಡಿಸಿದೆ, ಪ್ರಸ್ತುತ ಪಿಯು ಪದ್ಧತಿಯನ್ನು ರದ್ದುಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಭಾಷಾ ನೀತಿ: ಐದನೇ ತರಗತಿಯವರೆಗೂ ಎಲ್ಲಾ ಬೋರ್ಡ್ ಗಳಲ್ಲಿ ಕನ್ನಡ ಅಥವಾ ಮಾತ್ರ ಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಲು ಶಿಫಾರಸ್ಸು ಹೊರಡಿಸಲಾಗಿದೆ. ಜೊತೆಗೆ ಕನ್ನಡ ಮಾತೃಭಾಷೆ ಇಂಗ್ಲಿಷ್ ದ್ವಿ ಭಾಷಾ ಮಾದರಿಯನ್ನು ಅಳವಡಿಸುವ ಪ್ರಸ್ತಾಪವಿದೆ.

ಸಾಮಾನ್ಯ ಪ್ರವೇಶ ಮತ್ತು ಗುಣಮಟ್ಟ; 

  • ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕ ಗೊಳಿಸುವುದು,
  • ವಲಸಿ ಹೋಗುವ ಮಕ್ಕಳಿಗಾಗಿಯೇ ವಸತಿ ಶಾಲೆಗಳ ಸ್ಥಾಪನೆ
  • ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯ ಮಟ್ಟಕ್ಕೆ ಹೆಚ್ಚಿಸುವುದು,
  • ಖಾಸಗಿ ಶಾಲೆಗಳಿಗೆ ಪ್ರತ್ಯೇಕ ನಿಯಂತ್ರಣ ಸಂಸ್ಥೆ ಸ್ಥಾಪನೆ

ಪಠ್ಯಕ್ರಮ ಮತ್ತು ಶಿಕ್ಷಕ ವ್ಯವಸ್ಥೆ:

  • ಸಮಗ್ರ ರಾಜ್ಯ ಪಠ್ಯಕ್ರಮ(CCSE ರೂಪಣೆ,
  • NCERT ಪಠ್ಯ ಪುಸ್ತಕ ಅವಲಂಬನೆಯನ್ನು ಕಡಿಮೆ ಮಾಡಿ ಸ್ಥಳೀಕರಣ
  • ಭಾರತೀಯ ಜ್ಞಾನ ವ್ಯವಸ್ಥೆ ಕುರಿತು ಕೋರ್ಸುಗಳಿಗೆ ವಿಶೇಷ ಸಮಿತಿ,
  • ಅತಿಥಿ ಮತ್ತು ಗುತ್ತಿಗೆ ಶಿಕ್ಷಕರ ನೇಮಕಾತಿ ಸ್ಥಗಿತ

ಸಾಮಾಜಿಕ ನ್ಯಾಯ ಮತ್ತು ಸಮಾನತೆ; 

  • ಸಾಂವಿಧಾನಿಕ ಮೌಲ್ಯ ಶಿಕ್ಷಣ ಕಡ್ಡಾಯಗೊಳಿಸುವುದು
  • ಹಂತ ಹಂತವಾಗಿ ಆರ್ಟಿಇ (RTE) ವ್ಯಾಪ್ತಿಯನ್ನು 4 ರಿಂದ 18 ವಯಸ್ಸಿನ ಮಕ್ಕಳಿಗೆ ವಿಸ್ತರಣೆ ಮಾಡುವುದು. (ಪ್ರಸ್ತುತ 6. 14)
  • ಸಾರ್ವಜನಿಕ ಗ್ರಂಥಾಲಯಗಳ ಮೂಲಕ ವೈಜ್ಞಾನಿಕ ಮತ್ತು ಸಂವಿಧಾನ ಮೌಲ್ಯಗಳ ಪ್ರಚಾರ

ಸಂಸ್ಥಾತ್ಮಕ ಬದಲಾವಣೆಗಳು:

  • ಜೀವಮಾನ ಕಲಿಕೆ ನಿರ್ದೇಶನಲಯ ಪುನರುಜ್ಜೀವನ
  • DSERT ಅನ್ನು ಸ್ವಯತ್ತ SCERT ಆಗಿ ಪರಿವರ್ತನೆ ಮಾಡುವುದು
  • ಕರ್ನಾಟಕ ರಾಜ್ಯ ಮತ್ತು ಮುಕ್ತ ಶಾಲಾ ವ್ಯವಸ್ಥೆ ರೂಪಣೆ
  • ಸಮಾನಾಂತರ ಸಂಸ್ಥೆಗಳನ್ನು ವಿಲೀನಗೊಳಿಸಿ, ಸಮಗ್ರ ಆಯುಕ್ತ ಆಲಯ ಸ್ಥಾಪನೆ

ಹಣಕಾಸು ಶಿಫಾರಸುಗಳು:

ಶಿಕ್ಷಣಕ್ಕಾಗಿ ರಾಜ್ಯದ ಒಟ್ಟು ವೆಚ್ಚದಲ್ಲಿ ಕನಿಷ್ಠ 30% ಮೀಸಲಿಡಲು, ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 5 ರಿಂದ 10% ವೆಚ್ಚ ಹೆಚ್ಚಳ ಖಚಿತಪಡಿಸಲು ಶಿಫಾರಸ್ಸು ಮಾಡಲಾಗಿದೆ.

ರಾಜ್ಯ ನೀತಿ ಆಯೋಗದ ಈ ಶಿಫಾರಸ್ಸುಗಳು ರಾಜ್ಯದ ಶಾಲಾ ಶಿಕ್ಷಣಕ್ಕೆ ದಿಕ್ಕು ತೋರಲಿದ್ದು, ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ.

 

WhatsApp Group Join Now
Telegram Group Join Now

Leave a Comment