ರೈತರಿಗೆ ಖುಷಿ ಸುದ್ದಿ – 18 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ

ರೈತರಿಗೆ ಖುಷಿ ಸುದ್ದಿ – 18 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ.!

ಬೆಂಗಳೂರು, ಆಗಸ್ಟ್ 08: ಕರ್ನಾಟಕ ಸರ್ಕಾರ ಈ ಬಾರಿ ರೈತರಿಗೆ ಸಿಹಿ ಸುದ್ದಿ ಹೇಳಿದೆ. ಒಟ್ಟು 18 ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕೊಡೋದಕ್ಕೆ ನಿರ್ಧಾರ ಮಾಡಿಕೊಂಡಿದೆ. ರಾಗಿ, ಜೋಳ, ಭತ್ತ ಹಾಗು ಇನ್ನೂ ಹಲವು ಬೆಳೆಗಳಿಗೆ ಈ ಬಾರಿ ಬೆಲೆ ಹೆಚ್ಚಾಗಿದೆ.

WhatsApp Group Join Now
Telegram Group Join Now

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಂತೆ, ಈ ನಿರ್ಧಾರ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಅಂತಿಮಗೊಂಡಿದೆ. ಕಳೆದ ವರ್ಷ 6.11 ಲಕ್ಷ ರೈತರಿಗೆ 7,135 ಕೋಟಿ ರೂ. ಪಾವತಿಯಾಗಿತ್ತು. ಈ ಬಾರಿ ಸುಮಾರು 7 ಲಕ್ಷ ರೈತರಿಂದ ಬೆಳೆ ಖರೀದಿ ಮಾಡುವ ಗುರಿ ಇಟ್ಟಿದ್ದಾರೆ.

ಮುಖ್ಯ ದಿನಾಂಕಗಳು:

  • ನೋಂದಣಿ ಪ್ರಾರಂಭ: ಸೆಪ್ಟೆಂಬರ್ 2025
  • ಖರೀದಿ ಪ್ರಾರಂಭ: ಜನವರಿ 2026
  • ಖರೀದಿ ಮುಕ್ತಾಯ: ಮಾರ್ಚ್ 2026

ಬೆಲೆ ವಿವರ:

  • ರಾಗಿ: ₹4,846 ಪ್ರತಿ ಕ್ವಿಂಟಾಲ್ (₹596 ಹೆಚ್ಚಳ)
  • ಜೋಳ: ₹2,369 ಪ್ರತಿ ಕ್ವಿಂಟಾಲ್ (₹69 ಹೆಚ್ಚಳ)
  • ಭತ್ತ: ಬೆಂಬಲ ಬೆಲೆಗೆ ಖರೀದಿ

ಒಬ್ಬ ರೈತನಿಂದ ಗರಿಷ್ಠ 50 ಕ್ವಿಂಟಾಲ್ ವರೆಗೆ ಖರೀದಿಸಲಾಗುವುದು. ಜೋಳದ ಖರೀದಿ ಗುರಿ 3 ಲಕ್ಷ ಮೆಟ್ರಿಕ್ ಟನ್.

ಸಿರಿಧಾನ್ಯಗಳಿಗೆ ರಾಗಿಯೇ ದರ ಕೊಡಲಾಗುವುದು, ಜೊತೆಗೆ ಹೆಚ್ಚುವರಿಯಾಗಿ ₹114 ನೀಡಲು ಪ್ರಸ್ತಾವನೆ ಹಾಕಲಾಗಿದೆ. ಈ ಬಾರಿ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ಮೂಲಕ ನಡೆಯಲಿದೆ, ಬೆಳೆ ಸರ್ವೆ ಮಾಡಿ ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

WhatsApp Group Join Now
Telegram Group Join Now

Leave a Comment