LPG Subsidy : ಹಬ್ಬದ ದಿನವೇ ಸರ್ಕಾರದಿಂದ ಸಿಹಿ ಸುದ್ದಿ!
ಇತ್ತೀಚಿಗೆ ಎಲ್‌ಪಿಜಿ ಬೆಲೆ ಏರಿಕೆಯಿಂದ ಜನ ತುಂಬಾ ಕಂಗಾಲಾಗಿದ್ದರು. ತಿಂಗಳ ಕೊನೆಯ ಹೊತ್ತಿಗೆ ಸಿಲಿಂಡರ್ ಬೆಲೆ ಕೊಡೋಕೆ ತಲೆ ಕೆಡಿಸಿಕೊಳ್ಳ್ತಾ ಇರೋ ಜನರಿಗೆ ಈಗ ಕೇಂದ್ರ ಸರ್ಕಾರದಿಂದ ಸ್ವಲ್ಪ ಉಸಿರಾಟ ಸಿಕ್ಕಂತಾಗಿದೆ. ಏಕೆಂದರೆ, ಸಚಿವ ಸಂಪುಟವು 30,000 ಕೋಟಿ ರೂಪಾಯಿ ಸಬ್ಸಿಡಿ ಮಂಜೂರು ಮಾಡಿದೆ.
ಈ ಹಣವನ್ನು ನೇರವಾಗಿ ಭಾರತೀಯ ತೈಲ ನಿಗಮ (IOCL), ಭಾರತ್ ಪೆಟ್ರೋಲಿಯಂ (BPCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳಿಗೆ ನೀಡಲಾಗುತ್ತಿದೆ. ಅಂದರೆ, ಗ್ಯಾಸ್ ಬೆಲೆ ಏರಿದ್ರೂ ಅದನ್ನ ಗ್ರಾಹಕರ ಮೆಲೆ ಹಾಕೋದು ಬೇಡ, ಸರ್ಕಾರವೇ ನಷ್ಟ ಹೊತ್ತುಕೊಳ್ಳೋದು.
👉 ಜನರಿಗೆ ಲಾಭ ಏನು.?
ಸಿಲಿಂಡರ್ ಬೆಲೆ ಹಠಾತ್ ಏರಲ್ಲ. ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಸಿಗುತ್ತೆ. ಉಜ್ವಲ ಯೋಜನೆಯಡಿ ಬಡವರಿಗೆ ಗ್ಯಾಸ್ ತಲುಪೋದು ಸುಗಮವಾಗುತ್ತೆ. ಮಧ್ಯಮ ವರ್ಗಕ್ಕೂ ಇದು ಒಳ್ಳೆಯದಾಗುತ್ತೆ.
👉 ಸಚಿವರ ಹೇಳಿಕೆ
“ಜಾಗತಿಕ ಎಲ್‌ಪಿಜಿ ಬೆಲೆ ಬದಲಾವಣೆಗಳಿಂದ ಜನರಿಗೆ ಹೊರೆ ಬರಬಾರದು. ಕಂಪನಿಗಳೂ ನಷ್ಟದಲ್ಲಿ ಮುಳುಗಬಾರದು. ಆದ್ದರಿಂದಲೇ ಈ ಸಬ್ಸಿಡಿ ಕೊಟ್ಟಿದ್ದೇವೆ. 12 ಕಂತುಗಳಲ್ಲಿ ಹಣ ನೀಡಲಾಗುತ್ತದೆ” ಅಂತ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
👉 ಭವಿಷ್ಯದ ಪರಿಣಾಮ
ಸಬ್ಸಿಡಿಯಿಂದ ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಣೆ ಆಗತ್ತೆ. ಬೆಲೆ ಸ್ಥಿರವಾಗುತ್ತೆ. ಗ್ಯಾಸ್ ಸರಬರಾಜು ತೊಂದರೆ ಇಲ್ಲದೆ ನಡೆಯುತ್ತೆ. ಜನರಿಗೆ ಕನಿಷ್ಠ ಕೆಲವು ವರ್ಷ ಬೆಲೆ ಏರಿಕೆಯಿಂದ ಬಿಡುವು ಸಿಕ್ಕಂತಾಗತ್ತೆ.
ಒಟ್ಟಾರೆ, ಹಬ್ಬದ ಮೊದಲು ಬಂದಿರುವ ಈ ಸಬ್ಸಿಡಿ ಸುದ್ದಿ ಜನ ಜೀವನಕ್ಕೆ ಸ್ವಲ್ಪ ಮಟ್ಟಿಗೆ ಹಗುರ ಮಾಡೋದು ಖಚಿತ.