Loan ಮುಗಿಸಿದ್ರೂ ಸಿಬಿಲ್ ಸ್ಕೋರ್ ಏರಿಕೆ ಆಗ್ತಿಲ್ಲವ? ಕಾರಣ ಇವು !
ಲೋನ್ ಪಾವತಿ ಮುಗಿಸುವುದು ಯಾರಿಗೂ ಒಂದು ದೊಡ್ಡ ಹಂತ. EMI ಒತ್ತಡ ಮುಗಿದು, ಆರ್ಥಿಕ ಭಾರ ಕಡಿಮೆಯಾಗುತ್ತೆ. ಸಾಮಾನ್ಯವಾಗಿ, ಲೋನ್ ಮುಗಿದ್ರೆ ಸಿಬಿಲ್ ಸ್ಕೋರ್ ಕೂಡ ಸ್ವಲ್ಪ ಏರೋದು ಸಹಜ. ಆದರೆ, ಕೆಲವೊಮ್ಮೆ ತಿಂಗಳು ಕಳೆದರೂ ಸ್ಕೋರ್‌ನಲ್ಲಿ ಬದಲಾವಣೆ ಕಾಣೋದಿಲ್ಲ. ಹೀಗಾದ್ರೆ ಆತಂಕ ಬೇಡ—ಹೇಗೋ ಇಲ್ಲೋ ಕೆಲವು ಕಾರಣಗಳು ಮತ್ತು ಪರಿಹಾರಗಳು.
ಕ್ರೆಡಿಟ್ ಬ್ಯೂರೋ ಅಪ್‌ಡೇಟ್ ಆಗಲು ಸಮಯ ಬೇಕು
ಲೋನ್ ಮುಗಿಸಿದ ಮಾಹಿತಿಯನ್ನು ನಿಮ್ಮ ಲೋನ್‌ದಾತ (Bank/NBFC) ಕ್ರೆಡಿಟ್ ಬ್ಯೂರೋಗೆ ಕಳುಹಿಸ್ತಾರೆ.
ಆದ್ರೆ, ಈ ಪ್ರಕ್ರಿಯೆ ತಕ್ಷಣ ಆಗೋದಿಲ್ಲ. ಸಾಮಾನ್ಯವಾಗಿ 30 ರಿಂದ 60 ದಿನ ತೆಗೆದುಕೊಳ್ಳಬಹುದು. ಅಂದರೆ, ನೀವು ಪಾವತಿ ಮುಗಿಸಿದ ದಿನದಿಂದ ಒಂದು-ಎರಡು ತಿಂಗಳೊಳಗೆ ಮಾತ್ರ ಸ್ಕೋರ್ ಅಪ್‌ಡೇಟ್ ಆಗಬಹುದು.
ತಾಂತ್ರಿಕ ದೋಷ ಅಥವಾ ತಡವಾದ ರಿಪೋರ್ಟಿಂಗ್
ಕೆಲವೊಮ್ಮೆ ಬ್ಯಾಂಕ್ ಅಥವಾ NBFC ಸಿಸ್ಟಮ್‌ನಲ್ಲಿ ತಾಂತ್ರಿಕ ತೊಂದರೆ, ಅಥವಾ ತಪ್ಪಾದ ಡೇಟಾ ಎಂಟ್ರಿ ಇರುತ್ತದೆ. ಇದರಿಂದ ನಿಮ್ಮ ಲೋನ್ ಇನ್ನೂ “Active” ಆಗಿ ತೋರಬಹುದು. ಈ ತಪ್ಪು ಸರಿಪಡಿಸದೇ ಹೋದ್ರೆ ಸ್ಕೋರ್ ಏರೋದಿಲ್ಲ.
Loan Closure Document ಪಡೆಯದಿರುವುದು
Loan ಮುಗಿಸಿದ ಮೇಲೆ, ಕಡ್ಡಾಯವಾಗಿ Loan Closure Certificate & No Dues Certificate (NOC) ಪಡೆದುಕೊಳ್ಳಿ.
ಅದರಲ್ಲೇ ಕೊನೆ EMI ಪಾವತಿ ದಿನಾಂಕ, Loan ಸಂಖ್ಯೆ, & “Loan Closed” ಅಂತಿರುವುದನ್ನ ಖಚಿತಪಡಿಸಿಕೊಳ್ಳಿ.
ಇದಿಲ್ಲದೆ ಭವಿಷ್ಯದಲ್ಲಿ ಯಾವುದೇ ವಿವಾದ ಬಂದರೆ ನಿಮಗೆ ತೊಂದರೆ ಆಗಬಹುದು.
ವಿವಾದ ಪರಿಹಾರ ಪ್ರಕ್ರಿಯೆ (Dispute Resolution)
Loan ಮುಗಿದ್ರೂ ಕ್ರೆಡಿಟ್ ರಿಪೋರ್ಟ್‌ನಲ್ಲಿ ಬದಲಾವಣೆ ಕಾಣದಿದ್ದರೆ:
- ಮೊದಲು ನಿಮ್ಮ ಲೋನ್‌ದಾತರ Customer Care ಸಂಪರ್ಕಿಸಿ.
- ಸಮಸ್ಯೆ ಮುಂದುವರಿದರೆ credit ಬ್ಯೂರೋ (CIBIL, Experian, CRIF, Equifax) ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- “Dispute Resolution” ವಿಭಾಗದಲ್ಲಿ ನಿಮ್ಮ ಸಮಸ್ಯೆ ದಾಖಲಿಸಿ.
- Loan Closure Certificate, NOC, ಮತ್ತು ಪಾವತಿ ರಸೀದಿ Upload ಮಾಡಿ.
7 ರಿಂದ 21 ಕೆಲಸದ ದಿನಗಳ ಒಳಗೆ ಸಾಮಾನ್ಯವಾಗಿ ಸಮಸ್ಯೆ ಪರಿಹಾರ ವಾಗುತ್ತದೆ.
ಸಿಬಿಲ್ score ಪ್ರಾಮುಖ್ಯತೆ
ಸಿಬಿಲ್ ಸ್ಕೋರ್ 300 ರಿಂದ 900 ನಡುವಿರುತ್ತದೆ.
- 750+ ಇದ್ದರೆ: ಲೋನ್/ಕ್ರೆಡಿಟ್ ಕಾರ್ಡ್ ಸುಲಭವಾಗಿ ಸಿಗುತ್ತೆ.
- 650-749: ಲೋನ್ ಸಿಗಬಹುದು, ಆದರೆ ಬಡ್ಡಿದರ ಹೆಚ್ಚು ಇರಬಹುದು.
- 649 ಕೆಳಗೆ: ಲೋನ್ ಪಡೆಯಲು ಕಷ್ಟ.
ಅದಕ್ಕಾಗಿ, ಲೋನ್ ಮುಗಿಸಿದ ಮೇಲೆ ಈ ಕ್ರಮಗಳನ್ನು ನಿರ್ಲಕ್ಷಿಸಬೇಡಿ. ಸ್ಕೋರ್ ಹೆಚ್ಚಿದ್ರೆ ಭವಿಷ್ಯದಲ್ಲಿ ಹಣಕಾಸು ಅವಕಾಶಗಳು ಸುಲಭವಾಗುತ್ತವೆ.
- ಲೋನ್ ಮುಗಿದ ತಕ್ಷಣ NOC ಮತ್ತು Closure Certificate ಪಡೆದುಕೊಳ್ಳಿ.
- 2 ತಿಂಗಳು ಕಾದರೂ ಬದಲಾವಣೆ ಆಗದಿದ್ದರೆ, ವಿವಾದ ಪರಿಹಾರ ಪ್ರಕ್ರಿಯೆ ಪ್ರಾರಂಭಿಸಿ.
- ವರ್ಷಕ್ಕೊಮ್ಮೆ ನಿಮ್ಮ ಕ್ರೆಡಿಟ್ ರಿಪೋರ್ಟ್ ಉಚಿತವಾಗಿ ಚೆಕ್ ಮಾಡಿ (ಪ್ರತಿ ಬ್ಯೂರೋ ಒಂದ್ಸಲ ಉಚಿತವಾಗಿ ಕೊಡ್ತಾರೆ).
- ಲೋನ್ ಮುಗಿಸುವುದಷ್ಟೇ ಸಾಲದು, ದಾಖಲೆಗಳು ಮತ್ತು ಸ್ಕೋರ್ ಅಪ್‌ಡೇಟ್ ಆಗಿದೆಯಾ ಎಂದು ಪರಿಶೀಲಿಸುವುದು ಅತ್ಯಂತ ಮುಖ್ಯ.