ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ
ಬೆಂಗಳೂರು,(ಆ. 23): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2025 26 ನೇ ಸಾಲಿನ ಗ್ರಾಮೀಣ ಪುನರ್ ವಸತಿ ಯೋಜನೆಯಡಿಯಲ್ಲಿ ಬೆಂಗಳೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (VRW) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸಕ್ರಿಯವಾಗಿ ಸೇರಿಸುವ ಗುರಿಯೊಂದಿಗೆ ಈ ಹುದ್ದೆಗಳು ಗೌರವದನ ಆಧಾರದ ಮೇಲೆ ನೀಡಲಾಗುತ್ತದೆ.
ಖಾಲಿ ಇರುವ ಹುದ್ದೆಗಳ ಗ್ರಾಮ ಪಂಚಾಯಿತಿಗಳ ಹೆಸರು;
- ಯಲಹಂಕ ತಾಲೂಕು: ದೊಡ್ಡಜಾಲ
- ಬೆಂಗಳೂರು ದಕ್ಷಿಣ ತಾಲೂಕು: ಕೆ ಗೊಲ್ಲಹಳ್ಳಿ, ಎಚ್ ಗೊಲ್ಲಹಳ್ಳಿ, ಕಗ್ಗಲಿಪುರ, ಅಗರ
- ಬೆಂಗಳೂರು ಪೂರ್ವ ತಾಲೂಕು: ಕೊಡತಿ
- ಆನೇಕಲ್ ತಾಲೂಕ: ಬನ್ನೇರುಘಟ್ಟ
ಅರ್ಹತೆ;
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು:
- 18ರಿಂದ 45 ವರ್ಷದ ಒಳಗಿನವರು ಆಗಿರಬೇಕು,
- ಕನಿಷ್ಠ 10ನೇ ತರಗತಿ ಪಾಸಾದಾ ಅಥವಾ ಅನುತ್ತೀರ್ಣರಾದರು ಅರ್ಜಿ ಸಲ್ಲಿಸಬಹುದು.
- ಸಂಬಂಧಿತ ಗ್ರಾಮ ಪಂಚಾಯಿತಿಯ ಸ್ಥಳೀಯ ನಿವಾಸಿ ಆಗಿರಬೇಕು.
- ಶೇಕಡ 40ರಷ್ಟು ಅಂಗವಿಕಲತೆಯನ್ನು ಹೊಂದಿರುವ ಭಾಗಶಃ, ಶ್ರವಣದೋಷ, ದೃಷ್ಟಿ ದೋಷ ಅಥವಾ ದೈಹಿಕ ಅಂಗವಿಕಲತೆಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
- ಅಂಗವಿಕಲರ ಗುರುತುನ ಚೀಟಿ ಕಡ್ಡಾಯ
ಅರ್ಜಿ ಸಲ್ಲಿಸುವ ಪ್ರಕ್ರಿಯೆ;
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ತಮ್ಮ ಅರ್ಜಿಯನ್ನು 15 ಸೆಪ್ಟೆಂಬರ್ 2025 ರ ಒಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಕಚೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು 560029 ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಯೊಂದಿಗೆ ಅಂಗವಿಕಲರ ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆ ಹಾಗೂ ಸ್ಥಳೀಯ ನಿವಾಸದ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ: 080-29752324 ಕರೆ ಮಾಡಿ ಸಂಪರ್ಕಿಸಬಹುದು
ಯೋಜನೆಯ ಮಹತ್ವ;
ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ವಿಕಲಚೇತನರ ಸಮಸ್ಯೆಗಳನ್ನು ಕಂಡುಹಿಡಿದು, ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊಂದಿರತಕ್ಕದ್ದು, ಈ ಮೂಲಕ ವಿಕಲಚೇತನರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಪೂರಕವಾಗಲಿದೆ.
ಈ ನೇಮಕಾತಿಯಿಂದಾಗಿ ಸಮಾಜಕ್ಕೆ ಕೊಡುಗೆ ನೀಡುವ ತಮ್ಮ ಸಾಮರ್ಥ್ಯವನ್ನು ತೋರಿಸುಸುವ ಮಹತ್ವದ ಅವಕಾಶವಾಗಲಿದೆ, ಇದು ವಿಕಲಚೇತನರ ಸಬಲೀಕರಣಕ್ಕೆ ಉಪಯೋಗವಾಗಲಿದೆ.