FASTag Annual Pass: ಹಳೆಯ ಫಾಸ್ಟ್‌ಟ್ಯಾಗ್‌ಗೆ ವಾರ್ಷಿಕ ಪಾಸ್ ಮಾಡಿಸಬಹುದಾ?

FASTag Annual Pass: ಹಳೆಯ ಫಾಸ್ಟ್‌ಟ್ಯಾಗ್‌ಗೆ ವಾರ್ಷಿಕ ಪಾಸ್ ಮಾಡಿಸಬಹುದಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತೀ ಬಾರಿ ಟೋಲ್ ಪಾವತಿಸೋದು ಕಿರಿಕಿರಿ ಆಗಿರೋವರಿಗೆ ಈಗ ಒಳ್ಳೆಯ ಸುದ್ದಿ. NHAI ಹೊಸದಾಗಿ ಪರಿಚಯಿಸಿರುವ FASTag ವಾರ್ಷಿಕ pass ಮೂಲಕ ಕೇವಲ ₹3000ರಲ್ಲಿ 200 tripಗಳು ಅಥವಾ ಒಂದು ವರ್ಷದವರೆಗೆ tool free ಪ್ರಯಾಣ ಸಾಧ್ಯವಾಗಿದೆ. ಪದೇ ಪದೇ recharge ಮಾಡಬೇಕಾದ ತೊಂದರೆ ಇಲ್ಲದೇ ಸುಗಮವಾಗಿ ಹೆದ್ದಾರಿಯಲ್ಲಿ ಸಂಚರಿಸಬಹುದು.

WhatsApp Group Join Now
Telegram Group Join Now

FASTag ವಾರ್ಷಿಕ ಪಾಸ್ ಎಂದರೇನು?

FASTag ವಾರ್ಷಿಕ ಪಾಸ್ ಎನ್ನುವುದು ಖಾಸಗಿ, ವಾಣಿಜ್ಯೇತರ ವಾಹನಗಳು (ಕಾರ್, ಜೀಪ್, ವ್ಯಾನ್) ಗಳಿಗಾಗಿ ಪರಿಚಯಿಸಲ್ಪಟ್ಟ ಪ್ರಿಪೇಯ್ಡ್ ಟೋಲ್ ಯೋಜನೆ. ಆಗಸ್ಟ್ 15, 2025 ರಿಂದ ಇದು ಜಾರಿಗೆ ಬಂದಿದೆ. ಈ ಪಾಸ್‌ನೊಂದಿಗೆ, ರಾಷ್ಟ್ರೀಯ ಹೆದ್ದಾರಿಗಳು (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳು (NE) ಯಲ್ಲಿ 200 ಟ್ರಿಪ್‌ಗಳು ಅಥವಾ ಒಂದು ವರ್ಷದವರೆಗೆ ಯಾವುದೇ ಹೆಚ್ಚುವರಿ ಟೋಲ್ ಶುಲ್ಕವಿಲ್ಲದೆ ಪ್ರಯಾಣಿಸಲು ಅವಕಾಶ.

ಇದರಿಂದ:

  • ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ಕಡಿಮೆ.
  • ಪ್ರತೀ ಬಾರಿ ರೀಚಾರ್ಜ್ ಮಾಡಬೇಕಾದ ಜಂಜಾಟ ಕಡಿಮೆ.
  • ದೀರ್ಘ ಪ್ರಯಾಣಿಕರಿಗೆ ಖರ್ಚು ಉಳಿತಾಯ.

ಹಳೆಯ ಫಾಸ್ಟ್‌ಟ್ಯಾಗ್‌ನಲ್ಲೇ ಸಕ್ರಿಯಗೊಳಿಸಬಹುದೇ?

ಹೊಸ FASTag ಖರೀದಿಸುವ ಅಗತ್ಯವಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್‌ನಲ್ಲಿ ಈ ಪಾಸ್ ಸಕ್ರಿಯಗೊಳಿಸಬಹುದು. ಆದರೆ, ವಾಹನ ನೋಂದಣಿ ಸಂಖ್ಯೆ (VRN) ಸರಿಯಾಗಿ ಲಿಂಕ್ ಆಗಿರಬೇಕು ಮತ್ತು ಫಾಸ್ಟ್‌ಟ್ಯಾಗ್ ವಿಂಡ್‌ಶೀಲ್ಡ್‌ನಲ್ಲಿ ಸರಿಯಾಗಿ ಅಳವಡಿಸಿರಬೇಕು.

ಖರೀದಿ ವಿಧಾನ

  1. ರಾಜ್‌ಮಾರ್ಗ್ yatra app Download ಮಾಡಿ (Google Play Store/Apple App Store).
  2. Annual Pass’ ಆಯ್ಕೆ ಮಾಡಿ → Pre-book ಕ್ಲಿಕ್ ಮಾಡಿ.
  3. ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಿ, ವಿವರಗಳನ್ನು ಪರಿಶೀಲಿಸಿ.
  4. OTP ಪರಿಶೀಲನೆ ಮಾಡಿ.
  5. ₹3000 ಪಾವತಿ ಮಾಡಿ (UPI/ಡೆಬಿಟ್/ಕ್ರೆಡಿಟ್ ಕಾರ್ಡ್/ನೆಟ್‌ಬ್ಯಾಂಕಿಂಗ್).

ಪಾವತಿ ಯಶಸ್ವಿಯಾದ ನಂತರ ಸಾಮಾನ್ಯವಾಗಿ 2 ಗಂಟೆಗಳೊಳಗೆ ಪಾಸ್ ಸಕ್ರಿಯಗೊಳ್ಳುತ್ತದೆ. ಕೆಲವೊಮ್ಮೆ 24 ಗಂಟೆಗಳವರೆಗೆ ತೆಗೆದುಕೊಳ್ಳಬಹುದು. ದೃಢೀಕರಣ SMS ಮೂಲಕ ಬರುತ್ತದೆ.

ರೀಚಾರ್ಜ್ ವಿಧಾನ

200 ಟ್ರಿಪ್‌ಗಳು ಅಥವಾ 1 ವರ್ಷ ಮುಗಿದ ನಂತರ, ಮತ್ತೆ ರಾಜ್‌ಮಾರ್ಗ್ ಯಾತ್ರಾ ಆಪ್ ಅಥವಾ NHAI ವೆಬ್‌ಸೈಟ್ ಮೂಲಕ ‘ರೀಚಾರ್ಜ್’ ಆಯ್ಕೆ ಮಾಡಿ ಇದೇ ವಿಧಾನ ಅನುಸರಿಸಬಹುದು.

200 ಟ್ರಿಪ್‌ಗಳ ಲೆಕ್ಕಾಚಾರ ಹೇಗೆ?

  • ಓಪನ್ ಟೋಲ್ ಪ್ಲಾಜಾ: ಪ್ರತೀ ಕ್ರಾಸಿಂಗ್ = 1 ಟ್ರಿಪ್ (ಹೋಗಿ-ಬರುವುದು = 2 ಟ್ರಿಪ್).
  • ಕ್ಲೋಸ್ಡ್ ಟೋಲ್ ಪ್ಲಾಜಾ: ಒಂದು ಪೂರ್ಣ ಪ್ರಯಾಣ (ಎಂಟ್ರಿ-ಎಕ್ಸಿಟ್) = 1 ಟ್ರಿಪ್.

ಉದಾಹರಣೆ:

  • ದೆಹಲಿ–ಚಂಡೀಗಢ ಹೆದ್ದಾರಿ = ಪ್ರತೀ ಟೋಲ್ ಕ್ರಾಸಿಂಗ್ ಒಂದೊಂದು ಟ್ರಿಪ್.
  • ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ = ಒಂದು ಪೂರ್ಣ ಪ್ರಯಾಣ ಒಂದೇ ಟ್ರಿಪ್.

ಹೀಗಾಗಿ, ನೀವು ದೀರ್ಘ ದೂರದಲ್ಲಿ ಪದೇಪದೇ ಪ್ರಯಾಣಿಸುತ್ತಿದ್ದರೆ, FASTag ವಾರ್ಷಿಕ ಪಾಸ್ ನಿಮ್ಮ ಸಮಯ, ಹಣ ಎರಡನ್ನೂ ಉಳಿಸುವ ಉತ್ತಮ ಆಯ್ಕೆ.

WhatsApp Group Join Now
Telegram Group Join Now

Leave a Comment