ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಗೆ ವ್ಯವಸ್ಥೆಯನ್ನು, ಸಂಪೂರ್ಣವಾಗಿ ಬದಲಿಸಿದ ಯೋಜನೆ ಎಂದರೆ ನಮ್ಮ ಮೆಟ್ರೋ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ (BMRCL) ಇದೀಗ ತನ್ನ ಮಾಹಿತಿ ತಂತ್ರಜ್ಞಾನ(IT) ವಿಭಾಗವನ್ನು ಇನ್ನಷ್ಟು ಬಲಪಡಿಸಲು ಎಕ್ಸ್ಪರ್ಟ್ ಡೆವಲಪರ್ (Expert Devloper) ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ.
ಹುದ್ದೆಗಳ ವಿವರಗಳು;
ಸಂಸ್ಥೆಯ ಹೆಸರು | ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (BMRCL) |
ಹುದ್ದೆಯ ಹೆಸರು | ಎಕ್ಸ್ಪರ್ಟ್ ಡೆವಲಪರ್ (EXPERT DEVLOPER) |
ಒಟ್ಟು ಉದ್ಯೋಗಗಳು | 5(ಅಗತ್ಯತೆ ಅನುಸಾರವಾಗಿ ಬದಲಾವಣೆ ಸಾಧ್ಯ) |
ಉದ್ಯೋಗದ ಸ್ವರೂಪ | ಗುತ್ತಿಗೆ ಆಧಾರದ ಮೇಲೆ (ಮೂರು ವರ್ಷಗಳ ಕಾಲ, ನಂತರ ವಿಸ್ತರಣೆ ಸಾಧ್ಯತೆ) |
ಉದ್ಯೋಗದ ಸ್ಥಳ | ಬೆಂಗಳೂರು |
ವೇತನ | ನಿಯಮದ ಪ್ರಕಾರ |
ವಯೋಮಿತಿ ಮತ್ತು ಅರ್ಹತೆ;
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಗರಿಷ್ಠ 36 ವರ್ಷ ವಯೋಮಿತಿಯನ್ನು ಮೀರಿರಬಾರದು, ಮೀಸಲಾತಿ ಆಧಾರದ ಮೇಲೆ ಪ್ರವರ್ಗದವರಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ. ಮತ್ತು B.Tech/ B.E/ BCA/ B.Sc ಪದವಿ ಅಥವಾ ಸಾಮಾನ್ಯ ವಿಜ್ಞಾನತೆಯನ್ನು ಹೊಂದಿರಬೇಕು. SQL ಜ್ಞಾನ ಹೊಂದಿರುವವರಿಗೆ ವಿಶೇಷ ಆದ್ಯತೆ ಇರುತ್ತದೆ.
ವೇತನ ಹಾಗೂ ಸೌಲಭ್ಯಗಳು;
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.62,5000 ವೇತನ ನಿಗದಿಯಾಗಲಿದೆ, ಜೊತೆಗೆ ಪ್ರಮಾಣ ಭತ್ಯೆ, ಅಪಘಾತ ವಿಮೆ, ವೈದ್ಯಕೀಯ ವಿಮೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೇರಿದಂತೆ ಸಂಸ್ಥೆಯ ಇತರೆ ಸೌಲಭ್ಯಗಳು ಆಯ್ಕೆಯಾದವರಿಗೆ ದೊರೆಯಲಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು, www.bmrc.co.in/Career ಈ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು ನಂತರ ಅದನ್ನು ಪ್ರಿಂಟ್ ಔಟ್ ತೆಗೆದುಕೊಂಡು, ಅಗತ್ಯ ದಾಖಲಾತಿಗಳ ಜೊತೆಗೆ ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು;
ಡೈ. ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
BMTC ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು – 560027.
ಪ್ರಮುಖ ದಿನಾಂಕಗಳು;
ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ | 8 ಸಪ್ಟೆಂಬರ್ 2025 |
ಮುದ್ರಿತ ಅರ್ಜಿ ಕಳುಹಿಸುವ ಕೊನೆಯ ದಿನಾಂಕ | 12 ಸೆಪ್ಟೆಂಬರ್ 2025 (ಸಂಜೆ 4:00 ಒಳಗೆ) |
ನಮ್ಮ ಮೆಟ್ರೋದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದು ಒಳ್ಳೆಯ ಅವಕಾಶವಾಗಲಿದೆ, ಉತ್ತಮ ವೇತನ ಸೌಲಭ್ಯಗಳು ಹಾಗೂ ಬೆಂಗಳೂರು ವಲಯದಲ್ಲಿ ಉದ್ಯೋಗದ ಭರವಸೆಯಿಂದಾಗಿ ಈ ನೇಮಕಾತಿಯು ಹೆಚ್ಚು ಗಮನ ಸೆಳೆಯಲಿದೆ.