ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26
ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡೋ ನಿಟ್ಟಿನಲ್ಲಿ ಶೈಕ್ಷಣಿಕ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಇದ್ರ ಮುಖ್ಯ ಉದ್ದೇಶ ಏನು ಅಂದ್ರೆ – ಬಡ, ಹಿಂದುಳಿದ ವರ್ಗದ ಮಕ್ಕಳಿಗೆ ಸಹಾಯ ಮಾಡಿ ಅವರು ಓದು ಮುಂದುವರಿಸೋಕೆ ಅವಕಾಶ ಮಾಡಿಕೊಡುವುದು.
ಈ ಯೋಜನೆಯಡಿ 2025-26ನೇ ಸಾಲಿಗೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2025 ಅಂತ ನಿಗದಿ ಮಾಡಲಾಗಿದೆ. ಎಲ್ಲ ಅರ್ಹ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಮಯಕ್ಕೆ ಮುಂಚಿತವಾಗಿ ಸಲ್ಲಿಸ್ಬೇಕು.
ಅರ್ಜಿಯ ಪ್ರಕ್ರಿಯೆ ತುಂಬಾ ಸುಲಭ. ವಿದ್ಯಾರ್ಥಿಗಳು ತಮ್ಮ ಕಾಲೇಜು, ವಿಶ್ವವಿದ್ಯಾಲಯ ಅಥವಾ ತಮಗೆ ಸಂಬಂಧಪಟ್ಟ ಸಂಸ್ಥೆಯಿಂದ ವಿವರ ಪಡೆದು, ನೇರವಾಗಿ SSP (State Scholarship Portal) ಮೂಲಕ ಅರ್ಜಿ ಹಾಕ್ಬೇಕು. ಆನ್‌ಲೈನ್‌ನಲ್ಲಿ ಎಲ್ಲ ವಿವರಗಳನ್ನು ನಮೂದಿಸಿದ್ರೆ ಸಾಕು.

ಇಲ್ಲಿ ಒಂದು ಮುಖ್ಯ ಅಂಶ ಏನೆಂದರೆ – ಹೊಸದಾಗಿ ಸೇರೋ ವಿದ್ಯಾರ್ಥಿಗಳು ಮತ್ತು ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳು ಇಬ್ಬರೂ ಸಹ ಅರ್ಜಿ ಹಾಕಬಹುದು. ಆದರೆ ಕೊಟ್ಟಿರುವ ಸಮಯದೊಳಗೆ ಅರ್ಜಿ ಹಾಕ್ಬೇಕು. ಸಮಯ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗೋದಿಲ್ಲ.
ಶೈಕ್ಷಣಿಕ ಸಹಾಯಧನ ಸಿಕ್ಕ್ರೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕ, ಟ್ಯೂಷನ್ ಫೀ, ಪುಸ್ತಕ ಖರೀದಿ, ಲ್ಯಾಬ್ ಶುಲ್ಕ, ಪರೀಕ್ಷಾ ಫೀ ಇವತ್ತೆಲ್ಲಾ ವೆಚ್ಚಗಳಿಗೆ ನೆರವಾಗುತ್ತದೆ. ಇದರಿಂದ ಬಡ ಮಕ್ಕಳಿಗೆ ಶಿಕ್ಷಣದ ಹೊರೆ ಕಡಿಮೆ ಆಗಿ, ಓದಿನಲ್ಲಿ ಇನ್ನಷ್ಟು ಆಸಕ್ತಿ ಮೂಡುತ್ತದೆ.
ಸರ್ಕಾರ ಈಗಾಗಲೇ ಹಲವು ವರ್ಷಗಳಿಂದ ಈ ಯೋಜನೆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಹಾಯ ಮಾಡ್ತಾ ಬಂದಿದೆ. ಈಗ ಮತ್ತೆ ಹೊಸ ಸಾಲಿಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಈ ಚಾನ್ಸ್ ಮಿಸ್ ಮಾಡ್ಕೊಳ್ಳಬಾರದು.
ಅರ್ಜಿಗೆ ಬೇಕಾಗುವ ಮುಖ್ಯ ದಾಖಲೆಗಳಲ್ಲಿ
- ಆಧಾರ್ ಕಾರ್ಡ್,
- ಕಾಸ್ಟ್ ಸರ್ಟಿಫಿಕೇಟ್,
- ಆದಾಯ ಪ್ರಮಾಣಪತ್ರ,
- ಕಾಲೇಜು ಬೋನಫೈಡ್ ಸರ್ಟಿಫಿಕೇಟ್,
- ಬ್ಯಾಂಕ್ ಖಾತೆ ವಿವರ ಇವೆಲ್ಲ ಸೇರಬೇಕು. ಎಲ್ಲ ದಾಖಲೆಗಳನ್ನು ಸ್ಕಾನ್ ಮಾಡಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡ್ಬೇಕು.
ಈ ಯೋಜನೆ ಮೂಲಕ ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯೋಕೆ ಅವಕಾಶ ಸಿಗ್ತದೆ. ಸರ್ಕಾರದ ಈ ಹೆಜ್ಜೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ತರುತ್ತದೆ ಅನ್ನೋದರಲ್ಲಿ ಸಂದೇಹವಿಲ್ಲ.
ಹಾಗಾಗಿ ಎಲ್ಲ ಅರ್ಹ ವಿದ್ಯಾರ್ಥಿಗಳು ಕೂಡಲೇ https://ssp.karnataka.gov.in/ ಈ ಪೋರ್ಟಲ್‌ಗೆ ಹೋಗಿ ಅರ್ಜಿ ಹಾಕ್ಬೇಕು. ಏನಾದರೂ ಸಹಾಯ ಬೇಕಾದ್ರೆ 155214 ಅನ್ನೋ ಟೋಲ್-ಫ್ರೀ ನಂಬರ್‌ಗೆ ಕರೆಮಾಡಬಹುದು.