ದುಬಾರಿ ಚಿನ್ನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ! ಕೇವಲ 37 ಸಾವಿರಕ್ಕೆ 10 ಗ್ರಾಂ ಬಂಗಾರ
ಭಾರತ ದೇಶವು ಜಗತ್ತಿನಲ್ಲಿಯೇ ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದೇಶವಾಗಿದೆ. ಆದರೂ, ತಿಂಗಳಿನಲ್ಲಿ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಶೇಕಡ 60ರಷ್ಟು ಕುಸಿತ ಕಂಡು ಬಂದಿದೆ, ಇದನ್ನು ನೆನಪಿನಲ್ಲಿಟ್ಟುಕೊಂಡು ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಕಡಿಮೆ ಬಜೆಟ್ ನಲ್ಲಿ ಚಿನ್ನ ಖರೀದಿಸುವವರಿಗೆ ಸರ್ಕಾರದ ಈ ನಿರ್ಧಾರವು ಬಂಗಾರ ಕರೆದಿಗೆ ಸಹಾಯ ಮಾಡಲಿದೆ, ಇದರಿಂದ ಬಂಗಾರದ ಮೇಲಿನ ಹೂಡಿಕೆಯು ಕೂಡ ಹೆಚ್ಚಾಗಲಿದೆ.
ಸಾರ್ವಜನಿಕರಿಗೆ ಚಿನ್ನವನ್ನು ಖರೀದಿಸಲು ಸಹಾಯವಾಗುವಂತೆ, ಕೇಂದ್ರ ಸರ್ಕಾರವು 9 ಕ್ಯಾರೆಟ್ ಚಿನ್ನವನ್ನು ಹಾಲ್ಮಾರ್ಕ ಮಾಡದಂಡಗಳಲ್ಲಿ ಸೇರಿಸಲು ಅನುಮೋದನೆ ನೀಡಿ ಆದೇಶವನ್ನು ಹೊರಡಿಸಿದೆ.
ಆಗಸ್ಟ್ ತಿಂಗಳಿನಿಂದ ರಿಂದ, 14K, 18K, 20K, 22K, 23K, 24 ಕ್ಯಾರೆಟ್, ಇತ್ಯಾದಿಗಳನ್ನು ಒಳಗೊಂಡ ಹಲ್ಮಾರ್ಕ್ ಶುದ್ಧತೆಗಳಿಗೆ 9k ಕ್ಯಾರೆಟ್ ಚಿನ್ನವನ್ನು ಅಧಿಕೃತವಾಗಿ ಸೇರಿಸಲಾಗಿದೆ.
ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನವು 99.9% ಶುದ್ಧ ಚಿನ್ನ ವಾಗಿದೆ, ಅಂದರೆ ಬೇರೆ ಯಾವುದೇ ಲೋಹಗಳ ಇದರಲ್ಲಿ ಸೇರ್ಪಡೆ ಆಗಿರುವುದಿಲ್ಲ, ಆದರೆ 9 ಕ್ಯಾರೆಟ್ ಚಿನ್ನವು 37.5% ಶುದ್ಧ ಚಿನ್ನ ವಾಗಿದೆ, ಉಳಿದ ಭಾಗವು ಇತರ ಲೋಹಗಳಿಂದ ಕೂಡಿರುತ್ತದೆ.
9 ಕ್ಯಾರೆಟ್ ಚಿನ್ನದ ಬೆಲೆಯು ಕಡಿಮೆ, ಕಡಿಮೆ ಬಜೆಟ್ ನಲ್ಲಿ ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ, 9 ಕ್ಯಾರೆಟ್ ಚಿನ್ನ ಕಡಿಮೆ ಬೆಲೆ ಹೊಂದಿರುವುದರಿಂದ ಸುರಕ್ಷಿತ ಹೂಡಿಕೆಯು ಕೂಡ ಆಗಲಿದೆ.
ಪ್ರಸ್ತುತವಾಗಿ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ, ಸುಮಾರು ರೂ.10,000 ಆಗಿದೆ ಅಂದರೆ ಹತ್ತು ಗ್ರಾಂ ಗೆ 1 ಲಕ್ಷ ರೂಪಾಯಿಗಳಲ್ಲಿ ಮಾರಾಟವಾಗುತ್ತದೆ. ಅದೇ 9 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂ. ಗೆ, ರೂ.3,700, 10 ಗ್ರಾಂ ಬೆಲೆ 37,000 ರೂ. ಆಗಲಿದೆ.
ಮುಂದಿನ ದಿನಗಳಲ್ಲಿ ಭಾರತದಲ್ಲಿ ದೀಪಾವಳಿ ಸೇರಿದಂತೆ ಇನ್ನಿತರ ಹಬ್ಬಗಳು ಬರುತ್ತಿರುವುದರಿಂದ ಸರ್ಕಾರ ಸರಿಯಾದ ಸಮಯದಲ್ಲಿ 9 ಕ್ಯಾರೆಟ್ ಚಿನ್ನವನ್ನು ಅನುಮೋದಿಸಿದೆ.